Sunday, December 28, 2014

ಬಕ ಪಕ್ಷಿ ಮತ್ತೆ ಏಡಿ ಕಥೆ - baka pakshi mattu edi kathe

ಒಂದು ಕೊಳ ಇತ್ತಂತೆ. ಅದರಲ್ಲಿದ್ದ ಮೀನುಗಳನ್ನ ತಿನ್ಕೊಂಡು ಒಂದು ಬಕ ಪಕ್ಷಿ ಜೀವನ ಮಾಡ್ತಾ ಇತ್ತಂತೆ..

ಹೀಗೆ ಸ್ವಲ್ಪ ವರ್ಷ ಆದ ಮೇಲೆ ಬಕ ಪಕ್ಷಿ ಅಜ್ಜ ಆಯ್ತಂತೆ. ಅದಿಕ್ಕೆ ಮೀನು ಹಿಡ್ಕೊಂಡು
ತಿನ್ನಕ್ಕೆ ಶಕ್ತಿನೇ ಇರ್ಲಿಲ್ವಂತೆ. ಉಪವಾಸ ಇದ್ದು ಇದ್ದು ಫುಲ್ ಸಣ್ಣ ಆಗೋಗಿತ್ತಂತೆ ಅದು.

ಎಷ್ಟ್ ದಿನ ಊಟ ಮಾಡದೆ ಇರಕ್ಕಾಗತ್ತೆ ಅಲ್ವಾ.. ಬಕ ಪಕ್ಷಿ ಒಂದು ಪ್ಲಾನ್ ಮಾಡ್ತಂತೆ. ಕೊಳದ ತುದಿಯಲ್ಲಿ ಒಂದೇ ಕಾಲಲ್ಲಿ ನಿಂತುಕೊಂಡು ಧ್ಯಾನ ಮಾಡ್ತಾ ಇರೋ ಹಾಗೆ ನಾಟ್ಕ
ಮಾಡಕ್ಕೆ ಶುರು ಮಾಡ್ತಂತೆ.

ಮೀನುಗಳಿಗೆಲ್ಲ ಆಶ್ಚರ್ಯ, ಎಷ್ಟ್ ಹೊತ್ತಾಯ್ತು, ಬಕ ಪಕ್ಷಿ ಪಕ್ಕ ನೇ ಹೋದ್ರು ನು ಯಾವ್ ಮೀನನ್ನು
ತಿಂತಾನೆ ಇಲ್ಲ!

ಒಂದು ಮೀನು ಧೈರ್ಯ ಮಾಡಿ ಬಕ ಪಕ್ಷಿನಾ ಕೇಳೇ ಬಿಡ್ತು, “ಏನಾಯ್ತು ಬಕ ಪಕ್ಷಿ ನಿಂಗೆ? ಮೀನು ತಿನ್ನೋದು ಬಿಟ್ಟುಬಿಟ್ಯಾ?” ಅಂತ.

ಬಕ ಪಕ್ಷಿ ನಿಧಾನಕ್ಕೆ ಕಣ್ಣು ತೆಗೆದು ಮೀನಿಗೆ ಹೇಳ್ತು.. “ನೆನ್ನೆ ನಮ್ಮ ಕೊಳದ ಹತ್ತಿರ ಒಬ್ಬ ಜ್ಯೋತಿಷಿ ಬಂದಿದ್ದ, ಅವ್ನು ಹೇಳ್ತ ಇದ್ದ,
ನಂ ಕೊಳ ಈ ಸಲ ಬೇಸಿಗೇನಲ್ಲಿ ಬತ್ತಿ ಹೋಗತ್ತಂತೆ.. ನನಗೆ ಅದನ್ನ ಕೆಳಿ ತುಂಬಾ ಬೇಜಾರಾಯ್ತು, ನಾನು ಇದೆ ಕೊಳದಲ್ಲಿ ಹುಟ್ಟಿ ಬೆಳೆದವ್ನು, ಈ ಕೊಳದ ನೀರು ಬತ್ತಿದ್ರೆ ನೀವೆಲ್ಲ ಸತ್ತು ಹೋಗ್ತೀರಾ, ನಿಮ್ಗೆಲ್ಲ ಮುಕ್ತಿ ಸಿಕ್ಲಿ ಅಂತ ನಾನು ದೇವರ ಧ್ಯಾನ ಮಾಡ್ತ ಇದೀನಿ” ಅಂತ..

ಮೀನುಗಳಿಗೆ ಬಕ ಪಕ್ಷಿ ಮಾತು ಕೆಳಿ ತುಂಬಾ ಭಯ ಆಯ್ತಂತೆ.. ಅವು ಬಕ ಪಕ್ಷಿಗೆ ಕೇಳಿದ್ವಂತೆ.. “ಜ್ಯೋತಿಷಿ ನಾವೆಲ್ಲ ಬಚಾವಾಗಕ್ಕೆ ಏನಾದ್ರೂ ಉಪಾಯ ಹೇಳಿದ್ನಾ?”
ಬಕ ಪಕ್ಷಿಗೆ ಫುಲ್ ಖುಷಿ ಆಗೋಯ್ತಂತೆ.. ನನ್ನ ಪ್ಲಾನ್ ಕೆಲ್ಸ ಮಾಡ್ತು.. ಪೆದ್ದು ಗುಂಡ ಮೀನುಗಳೇ, ಇವತ್ತಿಂದ ನನಗೆ ಹಬ್ಬ ಅನ್ಕೊಂಡು ಹೇಳ್ತಂತೆ.. “ಹೌದು, ಇಲ್ಲೆ ಸ್ವಲ್ಪ ದೂರಲ್ಲಿ ಇನ್ನೊಂದು ದೊಡ್ಡ ಕೊಳ ಇದ್ಯಂತೆ, ಅಲ್ಲಿ ತುಂಬಾ ನೀರಿದ್ಯಂತೆ, ಬೇಕಾದ್ರೆ ನಿಮ್ಮನ್ನೆಲ್ಲ ಅಲ್ಲಿಗೆ ಕರ್ಕೊಂಡು ಹೋಗಿ ಬಿಡ್ತೀನಿ ನಾನು” ಅಂತ

ಸರಿ, ಮೀನುಗಳು ಒಪ್ಕೊಂಡ್ವಂತೆ ಬೇರೆ ಕೊಳಕ್ಕೆ ಹೋಗಕ್ಕೆ.
ಬಕ ಪಕ್ಷಿ ದಿನ ಒಂದೊಂದೇ ಮೀನನ್ನ ಬೆನ್ನು ಮೇಲೆ ಕೂರ್ಸ್ಕೊಂಡು ಹೋಗ್ತೀನಿ ಅಂತ ಹಾರಿಸ್ಕೊಂಡು ಹೋಗಿ ತಿಂದು ಹಾಕ್ತಾ ಇತ್ತಂತೆ.
ಹೀಗೆ ಆ ಕೊಳದಲ್ಲಿ ಇದ್ದ ಮೀನೆಲ್ಲ ಖಾಲಿ ಆದ್ವಂತೆ.
ನೆಕ್ಸ್ಟ್ ಏನ್ ಮಾಡೋದು, ಬಕ ಪಕ್ಷಿ ಒಂದು ಏಡಿ ನಾ ಬೇರೆ ಕೊಳಕ್ಕೆ ಬಿಡ್ತೀನಿ ನಿನ್ನ ಅಂತ ಕರ್ಕೊಂಡು ಹೋಯ್ತಂತೆ. ಹಾರ್ತಾ ಇರುವಾಗ, ಏಡಿ ಕೆಳಗೆ ನೋಡತ್ತೆ, ಅಲ್ಲಿ ಮೀನುಗಳದ್ದು ಮೂಳೆಗಳೆಲ್ಲ ಬಿದ್ದಿತ್ತಂತೆ. ಏಡಿ ಜಾಣ, ಅದಿಕ್ಕೆ ಬಕ ಪಕ್ಷಿ ಮಾಡಿದ ಮೋಸ ಗೊತ್ತಾಗೋಯ್ತು..
ಮಾಡ್ತೀನಿ ಈ ಬಕ ಪಕ್ಷಿಗೆ ಅಂತ ಕೇಳ್ತಂತೆ “ಬಕ ಪಕ್ಷಿ, ನಿನಗೆ ಹಾರಿ ಹಾರಿ ಸುಸ್ತಾಗಿರ್ಬೇಕಲ್ವಾ, ಸ್ವಲ್ಪ ಹೊತ್ತು ರೆಸ್ಟ್ ತಗೊಂಡು ಹೋಗೋಣ?”
ಬಕ ಪಕ್ಷಿ ಸರಿ ಅಂತ ಇನ್ನೇನು ನೆಲದ ಮೇಲೆ ಇಳಿಬೇಕು ಅನ್ನುವಾಗ, ಏಡಿ ಅದರ ಕತ್ತನ್ನ ಕಟಂ ಅಂತ ಕಚ್ಚಿ ಬಿಡ್ತಂತೆ.. ಬಕ ಪಕ್ಷಿ ಗೊಟಕ್ ಅಂತು..
ಜಾಣ ಏಡಿ ತಪ್ಪಿಸ್ಕೊಳ್ತು.

ಯಾರನ್ನೂ ಹಾಗೆಲ್ಲ ಸುಮ್ ಸುಮ್ನೆ ನಂಬಬಾರ್ದು.. ಕಷ್ಟ ಬಂದಾಗ ಸಮಾಧಾನವಾಗಿ ಯೋಚನೆ ಮಾಡಿ ಸರಿಯಾಗಿರೋ ಡಿಸಿಶನ್ ತಗೋಬೇಕು..
======================================================================

Ondu koLa ittante. Adarallidda meenugaLanna tinkondu ondu baka pakshi jeevana maadta ittante.
Baka pakshi koLadalliro meenugaLanna tinkondu jeevana maadta ittante.

Heege swalpa varsha aada mele baka pakshi ajja aytante. Adikke menu hidkondu
Tinnakke shaktine irlilvante. Upavasa iddu iddu full saNNa agogittante adu.

Esht dina oota maadade irakkagatte alva.. Baka pakshi ondu plan madtante.

KoLada tudiyalli onde kaalalli nintukondu baka pakshi dhyana madta iro haage naatka
Madakke shuru madtante.

MeenugaLigella ashcharya, esht hottaytu, baka pakshi pakka ne hodru nu yav meenannu
Tintane illa!

Ondu menu dhairya madi baka pakshi na keLe bidtu, “enaytu baka pakshi ninge? Menu tinnodu bittubitya?” anta.

Baka pakshi nidhanakke kaNNu tegedu meenige heLtu.. “nenne namma koLala hattira obba jyotishi bandidda, avnu heLta idda, Nam koLa ee sala besigenalli batti hogattante.. Nange adanna keLi tumba bejaraytu, naanu ide koLadalli hutti beLedavnu, ee koLada neeru battidre neevella sattu hogteera, nimgella mukti sikli anta naanu devara dhyana maadta idini” anta..

MeenugaLige baka pakshi maatu keLi tumba bhaya aytante.. avu baka pakshige keLidvante.. “jyotishi naavella bachavagakke enadru upaya heLidna?”

Baka pakshige full khushi agoytante.. nanna plan kelsa madtu.. peddu gunda meenugaLe ivattinda nange habba ankondu heLtante.. “Houdu, ille swalpa dooralli innondu dodda koLa idyante, alli tumba neeridyante, bekadre nimmannella allige karkondu hogi bidteeni naanu” anta

Sari, meenugaLu opkondvante bere koLakke hogakke.

Baka pakshi dina ondonde meenanna bennu mele kooriskondu hogteeni anta haariskondu hogi tindu haakta ittante.

Heege aa koLadalli idda meenella khali aadvante.

Next en madodu, baka pakshi ondu edi na bere koLakke bidteeni ninna anta karkondu hoytante. Haarta iruvaga, edi keLage nodatte, alli meenugaLaddu mooLegaLella biddittante. Edi jaana, adikke baka pakshi madida mosa gottagoytu.. maadteeni ee baka pakshige anta keLtante “baka pakshi, ninge haari haari sustagirbekalva, swalpa hottu rest tagondu hogona?” anta

Baka pakshi sari anta innenu nelada mele iLibeku annuvaga, edi adara kattanna katam anta kacchi bidtante.. Baka pakshi gotak   antu.. Jaana edi tappiskoLtu.

Yarannu haagella sum sumne nambabardu.. kashta bandaga samadhanavagi yochane maadi sariyagiro decision tagobeku..





9 comments:

  1. ಮಕ್ಕಳಿಗೆ ಕತೆ ಹೇಳಲು ಚೆನ್ನಾಗಿದೆ. ಹೀಗೆ ಕತೆಗಳನ್ನು ಸೇರಿಸಿ. ಒಂದು ಸಲಹೆ: ಕತೆಯ ಮಧ್ಯೆ ಅನಗತ್ಯವಾಗಿ ಇಂಗ್ಲಿಷ್ ಪದಗಳನ್ನು ತುರುಕಬೇಡಿ! ಇದರಿಂದ ಮಕ್ಕಳು ಶುದ್ಧ ಕನ್ನಡ ಪದಗಳಿಂದ ವಂಚಿತರಾಗುತ್ತಾರೆ‌.

    ReplyDelete
  2. Thanks nagaraja avre.. Houdu, English turkodu chenagiralla, I understand.. But ivagina maklige avrige gottiro shabdagalalli heLidre swalpa easy anta ashte.. I just wrote as I talk..

    ReplyDelete
    Replies
    1. Putani kathegalu: http://www.youtube.com/playlist?list=PLwf-YVfhrGYpi-7TcxfTAl40nM2OIv-Tc

      Delete
    2. Putani kathegalu: http://www.youtube.com/playlist?list=PLwf-YVfhrGYpi-7TcxfTAl40nM2OIv-Tc

      Delete
    3. ಮಕ್ಕಳಿಗೆ ಗೊತ್ತಿರೋ ಭಾಷೆ ಎಂದರೆ ಇಂಗ್ಲೀಷೆ? ಮಗುವಿಗೆ ಹುಟ್ಟುತ್ತಾ ಯಾವ ಭಾಷೆಯೂ ಗೊತ್ತಿರುವುದಿಲ್ಲ. ನಾವು ಮಾತನಾಡುವುದನ್ನು ಕೇಳಿ, ನೋಡಿ ಅವರು ಕಲಿಯುವುದು.

      ನಿಮ್ಮ ಪ್ರಯತ್ನ ಬಹಳ ಸ್ವಾಗತಾರ್ಹ. ಅದರಲ್ಲಿ ಎರಡು ಮಾತಿಲ್ಲ. ದಯವಿಟ್ಟು ಮುಂದುವರೆಸಿ.

      ಇಂಗ್ಲೀಷು ಸೇರಿಸಿ ಮಾತನಾಡುವುದು ನಮ್ಮ ಸಮಾಜಕ್ಕೇ ತಗುಲಿದೆ. ಅದನ್ನು ಕಡಿಮೆ ಮಾಡುವುದರಲ್ಲಿ ನಿಮ್ಮ ಈ ಮಾಧ್ಯಮ(ಬ್ಲಾಗ್) ಮಹತ್ತರ ಪಾತ್ರ ವಹಿಸುತ್ತದೆ. ದಯವಿಟ್ಟು ಅನ್ಯಥಾ ಭಾವಿಸಬೇಡಿ.

      Delete
  3. ಇನ್ನೂ ಜಾಸ್ತಿ ಕತೆಗಳನ್ನು upload ಮಾಡಿ...

    ReplyDelete
  4. ಇನ್ನೂ ಜಾಸ್ತಿ ಕತೆಗಳನ್ನು upload ಮಾಡಿ...

    ReplyDelete
  5. Thanks for the comment.. ಮಾಡ್ತಿeನಿ... ಕಥೆ ನಿಮಗೆ ಇಷ್ಟ ಆಯ್ತ? ಆಗಿದ್ರೆ ಕನ್ನಡದ್ದೇ ಅಥವಾ ಇಂಗ್ಲಿಷ್ದೇ ? Audio version ಇದೆ youtube ಅಲ್ಲಿ.. ಅದನ್ನೂ ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ...

    ReplyDelete
  6. Sumi avre nimma kathegalu bahala chanagide namma makkalige bahala ista aguthade

    ReplyDelete