ರಾಜ ಮತ್ತು ಮಂಗಣ್ಣ
putani kathegalu
Wednesday, June 24, 2015
Sunday, December 28, 2014
ಬಕ ಪಕ್ಷಿ ಮತ್ತೆ ಏಡಿ ಕಥೆ - baka pakshi mattu edi kathe
ಒಂದು ಕೊಳ ಇತ್ತಂತೆ. ಅದರಲ್ಲಿದ್ದ ಮೀನುಗಳನ್ನ ತಿನ್ಕೊಂಡು ಒಂದು ಬಕ ಪಕ್ಷಿ ಜೀವನ ಮಾಡ್ತಾ ಇತ್ತಂತೆ..
ಹೀಗೆ ಸ್ವಲ್ಪ ವರ್ಷ ಆದ ಮೇಲೆ ಬಕ ಪಕ್ಷಿ ಅಜ್ಜ ಆಯ್ತಂತೆ. ಅದಿಕ್ಕೆ ಮೀನು ಹಿಡ್ಕೊಂಡು
ತಿನ್ನಕ್ಕೆ ಶಕ್ತಿನೇ ಇರ್ಲಿಲ್ವಂತೆ. ಉಪವಾಸ ಇದ್ದು ಇದ್ದು ಫುಲ್ ಸಣ್ಣ ಆಗೋಗಿತ್ತಂತೆ ಅದು.
ಎಷ್ಟ್ ದಿನ ಊಟ ಮಾಡದೆ ಇರಕ್ಕಾಗತ್ತೆ ಅಲ್ವಾ.. ಬಕ ಪಕ್ಷಿ ಒಂದು ಪ್ಲಾನ್ ಮಾಡ್ತಂತೆ. ಕೊಳದ ತುದಿಯಲ್ಲಿ ಒಂದೇ ಕಾಲಲ್ಲಿ ನಿಂತುಕೊಂಡು ಧ್ಯಾನ ಮಾಡ್ತಾ ಇರೋ ಹಾಗೆ ನಾಟ್ಕ
ಮಾಡಕ್ಕೆ ಶುರು ಮಾಡ್ತಂತೆ.
ಮೀನುಗಳಿಗೆಲ್ಲ ಆಶ್ಚರ್ಯ, ಎಷ್ಟ್ ಹೊತ್ತಾಯ್ತು, ಬಕ ಪಕ್ಷಿ ಪಕ್ಕ ನೇ ಹೋದ್ರು ನು ಯಾವ್ ಮೀನನ್ನು
ತಿಂತಾನೆ ಇಲ್ಲ!
ಒಂದು ಮೀನು ಧೈರ್ಯ ಮಾಡಿ ಬಕ ಪಕ್ಷಿನಾ ಕೇಳೇ ಬಿಡ್ತು, “ಏನಾಯ್ತು ಬಕ ಪಕ್ಷಿ ನಿಂಗೆ? ಮೀನು ತಿನ್ನೋದು ಬಿಟ್ಟುಬಿಟ್ಯಾ?” ಅಂತ.
ಬಕ ಪಕ್ಷಿ ನಿಧಾನಕ್ಕೆ ಕಣ್ಣು ತೆಗೆದು ಮೀನಿಗೆ ಹೇಳ್ತು.. “ನೆನ್ನೆ ನಮ್ಮ ಕೊಳದ ಹತ್ತಿರ ಒಬ್ಬ ಜ್ಯೋತಿಷಿ ಬಂದಿದ್ದ, ಅವ್ನು ಹೇಳ್ತ ಇದ್ದ,
ನಂ ಕೊಳ ಈ ಸಲ ಬೇಸಿಗೇನಲ್ಲಿ ಬತ್ತಿ ಹೋಗತ್ತಂತೆ.. ನನಗೆ ಅದನ್ನ ಕೆಳಿ ತುಂಬಾ ಬೇಜಾರಾಯ್ತು, ನಾನು ಇದೆ ಕೊಳದಲ್ಲಿ ಹುಟ್ಟಿ ಬೆಳೆದವ್ನು, ಈ ಕೊಳದ ನೀರು ಬತ್ತಿದ್ರೆ ನೀವೆಲ್ಲ ಸತ್ತು ಹೋಗ್ತೀರಾ, ನಿಮ್ಗೆಲ್ಲ ಮುಕ್ತಿ ಸಿಕ್ಲಿ ಅಂತ ನಾನು ದೇವರ ಧ್ಯಾನ ಮಾಡ್ತ ಇದೀನಿ” ಅಂತ..
ಮೀನುಗಳಿಗೆ ಬಕ ಪಕ್ಷಿ ಮಾತು ಕೆಳಿ ತುಂಬಾ ಭಯ ಆಯ್ತಂತೆ.. ಅವು ಬಕ ಪಕ್ಷಿಗೆ ಕೇಳಿದ್ವಂತೆ.. “ಜ್ಯೋತಿಷಿ ನಾವೆಲ್ಲ ಬಚಾವಾಗಕ್ಕೆ ಏನಾದ್ರೂ ಉಪಾಯ ಹೇಳಿದ್ನಾ?”
ಬಕ ಪಕ್ಷಿಗೆ ಫುಲ್ ಖುಷಿ ಆಗೋಯ್ತಂತೆ.. ನನ್ನ ಪ್ಲಾನ್ ಕೆಲ್ಸ ಮಾಡ್ತು.. ಪೆದ್ದು ಗುಂಡ ಮೀನುಗಳೇ, ಇವತ್ತಿಂದ ನನಗೆ ಹಬ್ಬ ಅನ್ಕೊಂಡು ಹೇಳ್ತಂತೆ.. “ಹೌದು, ಇಲ್ಲೆ ಸ್ವಲ್ಪ ದೂರಲ್ಲಿ ಇನ್ನೊಂದು ದೊಡ್ಡ ಕೊಳ ಇದ್ಯಂತೆ, ಅಲ್ಲಿ ತುಂಬಾ ನೀರಿದ್ಯಂತೆ, ಬೇಕಾದ್ರೆ ನಿಮ್ಮನ್ನೆಲ್ಲ ಅಲ್ಲಿಗೆ ಕರ್ಕೊಂಡು ಹೋಗಿ ಬಿಡ್ತೀನಿ ನಾನು” ಅಂತ
ಸರಿ, ಮೀನುಗಳು ಒಪ್ಕೊಂಡ್ವಂತೆ ಬೇರೆ ಕೊಳಕ್ಕೆ ಹೋಗಕ್ಕೆ.
ಬಕ ಪಕ್ಷಿ ದಿನ ಒಂದೊಂದೇ ಮೀನನ್ನ ಬೆನ್ನು ಮೇಲೆ ಕೂರ್ಸ್ಕೊಂಡು ಹೋಗ್ತೀನಿ ಅಂತ ಹಾರಿಸ್ಕೊಂಡು ಹೋಗಿ ತಿಂದು ಹಾಕ್ತಾ ಇತ್ತಂತೆ.
ಹೀಗೆ ಆ ಕೊಳದಲ್ಲಿ ಇದ್ದ ಮೀನೆಲ್ಲ ಖಾಲಿ ಆದ್ವಂತೆ.
ನೆಕ್ಸ್ಟ್ ಏನ್ ಮಾಡೋದು, ಬಕ ಪಕ್ಷಿ ಒಂದು ಏಡಿ ನಾ ಬೇರೆ ಕೊಳಕ್ಕೆ ಬಿಡ್ತೀನಿ ನಿನ್ನ ಅಂತ ಕರ್ಕೊಂಡು ಹೋಯ್ತಂತೆ. ಹಾರ್ತಾ ಇರುವಾಗ, ಏಡಿ ಕೆಳಗೆ ನೋಡತ್ತೆ, ಅಲ್ಲಿ ಮೀನುಗಳದ್ದು ಮೂಳೆಗಳೆಲ್ಲ ಬಿದ್ದಿತ್ತಂತೆ. ಏಡಿ ಜಾಣ, ಅದಿಕ್ಕೆ ಬಕ ಪಕ್ಷಿ ಮಾಡಿದ ಮೋಸ ಗೊತ್ತಾಗೋಯ್ತು..
ಮಾಡ್ತೀನಿ ಈ ಬಕ ಪಕ್ಷಿಗೆ ಅಂತ ಕೇಳ್ತಂತೆ “ಬಕ ಪಕ್ಷಿ, ನಿನಗೆ ಹಾರಿ ಹಾರಿ ಸುಸ್ತಾಗಿರ್ಬೇಕಲ್ವಾ, ಸ್ವಲ್ಪ ಹೊತ್ತು ರೆಸ್ಟ್ ತಗೊಂಡು ಹೋಗೋಣ?”
ಬಕ ಪಕ್ಷಿ ಸರಿ ಅಂತ ಇನ್ನೇನು ನೆಲದ ಮೇಲೆ ಇಳಿಬೇಕು ಅನ್ನುವಾಗ, ಏಡಿ ಅದರ ಕತ್ತನ್ನ ಕಟಂ ಅಂತ ಕಚ್ಚಿ ಬಿಡ್ತಂತೆ.. ಬಕ ಪಕ್ಷಿ ಗೊಟಕ್ ಅಂತು..
ಜಾಣ ಏಡಿ ತಪ್ಪಿಸ್ಕೊಳ್ತು.
ಯಾರನ್ನೂ ಹಾಗೆಲ್ಲ ಸುಮ್ ಸುಮ್ನೆ ನಂಬಬಾರ್ದು.. ಕಷ್ಟ ಬಂದಾಗ ಸಮಾಧಾನವಾಗಿ ಯೋಚನೆ ಮಾಡಿ ಸರಿಯಾಗಿರೋ ಡಿಸಿಶನ್ ತಗೋಬೇಕು..
======================================================================
ಹೀಗೆ ಸ್ವಲ್ಪ ವರ್ಷ ಆದ ಮೇಲೆ ಬಕ ಪಕ್ಷಿ ಅಜ್ಜ ಆಯ್ತಂತೆ. ಅದಿಕ್ಕೆ ಮೀನು ಹಿಡ್ಕೊಂಡು
ತಿನ್ನಕ್ಕೆ ಶಕ್ತಿನೇ ಇರ್ಲಿಲ್ವಂತೆ. ಉಪವಾಸ ಇದ್ದು ಇದ್ದು ಫುಲ್ ಸಣ್ಣ ಆಗೋಗಿತ್ತಂತೆ ಅದು.
ಎಷ್ಟ್ ದಿನ ಊಟ ಮಾಡದೆ ಇರಕ್ಕಾಗತ್ತೆ ಅಲ್ವಾ.. ಬಕ ಪಕ್ಷಿ ಒಂದು ಪ್ಲಾನ್ ಮಾಡ್ತಂತೆ. ಕೊಳದ ತುದಿಯಲ್ಲಿ ಒಂದೇ ಕಾಲಲ್ಲಿ ನಿಂತುಕೊಂಡು ಧ್ಯಾನ ಮಾಡ್ತಾ ಇರೋ ಹಾಗೆ ನಾಟ್ಕ
ಮಾಡಕ್ಕೆ ಶುರು ಮಾಡ್ತಂತೆ.
ಮೀನುಗಳಿಗೆಲ್ಲ ಆಶ್ಚರ್ಯ, ಎಷ್ಟ್ ಹೊತ್ತಾಯ್ತು, ಬಕ ಪಕ್ಷಿ ಪಕ್ಕ ನೇ ಹೋದ್ರು ನು ಯಾವ್ ಮೀನನ್ನು
ತಿಂತಾನೆ ಇಲ್ಲ!
ಒಂದು ಮೀನು ಧೈರ್ಯ ಮಾಡಿ ಬಕ ಪಕ್ಷಿನಾ ಕೇಳೇ ಬಿಡ್ತು, “ಏನಾಯ್ತು ಬಕ ಪಕ್ಷಿ ನಿಂಗೆ? ಮೀನು ತಿನ್ನೋದು ಬಿಟ್ಟುಬಿಟ್ಯಾ?” ಅಂತ.
ಬಕ ಪಕ್ಷಿ ನಿಧಾನಕ್ಕೆ ಕಣ್ಣು ತೆಗೆದು ಮೀನಿಗೆ ಹೇಳ್ತು.. “ನೆನ್ನೆ ನಮ್ಮ ಕೊಳದ ಹತ್ತಿರ ಒಬ್ಬ ಜ್ಯೋತಿಷಿ ಬಂದಿದ್ದ, ಅವ್ನು ಹೇಳ್ತ ಇದ್ದ,
ನಂ ಕೊಳ ಈ ಸಲ ಬೇಸಿಗೇನಲ್ಲಿ ಬತ್ತಿ ಹೋಗತ್ತಂತೆ.. ನನಗೆ ಅದನ್ನ ಕೆಳಿ ತುಂಬಾ ಬೇಜಾರಾಯ್ತು, ನಾನು ಇದೆ ಕೊಳದಲ್ಲಿ ಹುಟ್ಟಿ ಬೆಳೆದವ್ನು, ಈ ಕೊಳದ ನೀರು ಬತ್ತಿದ್ರೆ ನೀವೆಲ್ಲ ಸತ್ತು ಹೋಗ್ತೀರಾ, ನಿಮ್ಗೆಲ್ಲ ಮುಕ್ತಿ ಸಿಕ್ಲಿ ಅಂತ ನಾನು ದೇವರ ಧ್ಯಾನ ಮಾಡ್ತ ಇದೀನಿ” ಅಂತ..
ಮೀನುಗಳಿಗೆ ಬಕ ಪಕ್ಷಿ ಮಾತು ಕೆಳಿ ತುಂಬಾ ಭಯ ಆಯ್ತಂತೆ.. ಅವು ಬಕ ಪಕ್ಷಿಗೆ ಕೇಳಿದ್ವಂತೆ.. “ಜ್ಯೋತಿಷಿ ನಾವೆಲ್ಲ ಬಚಾವಾಗಕ್ಕೆ ಏನಾದ್ರೂ ಉಪಾಯ ಹೇಳಿದ್ನಾ?”
ಬಕ ಪಕ್ಷಿಗೆ ಫುಲ್ ಖುಷಿ ಆಗೋಯ್ತಂತೆ.. ನನ್ನ ಪ್ಲಾನ್ ಕೆಲ್ಸ ಮಾಡ್ತು.. ಪೆದ್ದು ಗುಂಡ ಮೀನುಗಳೇ, ಇವತ್ತಿಂದ ನನಗೆ ಹಬ್ಬ ಅನ್ಕೊಂಡು ಹೇಳ್ತಂತೆ.. “ಹೌದು, ಇಲ್ಲೆ ಸ್ವಲ್ಪ ದೂರಲ್ಲಿ ಇನ್ನೊಂದು ದೊಡ್ಡ ಕೊಳ ಇದ್ಯಂತೆ, ಅಲ್ಲಿ ತುಂಬಾ ನೀರಿದ್ಯಂತೆ, ಬೇಕಾದ್ರೆ ನಿಮ್ಮನ್ನೆಲ್ಲ ಅಲ್ಲಿಗೆ ಕರ್ಕೊಂಡು ಹೋಗಿ ಬಿಡ್ತೀನಿ ನಾನು” ಅಂತ
ಸರಿ, ಮೀನುಗಳು ಒಪ್ಕೊಂಡ್ವಂತೆ ಬೇರೆ ಕೊಳಕ್ಕೆ ಹೋಗಕ್ಕೆ.
ಬಕ ಪಕ್ಷಿ ದಿನ ಒಂದೊಂದೇ ಮೀನನ್ನ ಬೆನ್ನು ಮೇಲೆ ಕೂರ್ಸ್ಕೊಂಡು ಹೋಗ್ತೀನಿ ಅಂತ ಹಾರಿಸ್ಕೊಂಡು ಹೋಗಿ ತಿಂದು ಹಾಕ್ತಾ ಇತ್ತಂತೆ.
ಹೀಗೆ ಆ ಕೊಳದಲ್ಲಿ ಇದ್ದ ಮೀನೆಲ್ಲ ಖಾಲಿ ಆದ್ವಂತೆ.
ನೆಕ್ಸ್ಟ್ ಏನ್ ಮಾಡೋದು, ಬಕ ಪಕ್ಷಿ ಒಂದು ಏಡಿ ನಾ ಬೇರೆ ಕೊಳಕ್ಕೆ ಬಿಡ್ತೀನಿ ನಿನ್ನ ಅಂತ ಕರ್ಕೊಂಡು ಹೋಯ್ತಂತೆ. ಹಾರ್ತಾ ಇರುವಾಗ, ಏಡಿ ಕೆಳಗೆ ನೋಡತ್ತೆ, ಅಲ್ಲಿ ಮೀನುಗಳದ್ದು ಮೂಳೆಗಳೆಲ್ಲ ಬಿದ್ದಿತ್ತಂತೆ. ಏಡಿ ಜಾಣ, ಅದಿಕ್ಕೆ ಬಕ ಪಕ್ಷಿ ಮಾಡಿದ ಮೋಸ ಗೊತ್ತಾಗೋಯ್ತು..
ಮಾಡ್ತೀನಿ ಈ ಬಕ ಪಕ್ಷಿಗೆ ಅಂತ ಕೇಳ್ತಂತೆ “ಬಕ ಪಕ್ಷಿ, ನಿನಗೆ ಹಾರಿ ಹಾರಿ ಸುಸ್ತಾಗಿರ್ಬೇಕಲ್ವಾ, ಸ್ವಲ್ಪ ಹೊತ್ತು ರೆಸ್ಟ್ ತಗೊಂಡು ಹೋಗೋಣ?”
ಬಕ ಪಕ್ಷಿ ಸರಿ ಅಂತ ಇನ್ನೇನು ನೆಲದ ಮೇಲೆ ಇಳಿಬೇಕು ಅನ್ನುವಾಗ, ಏಡಿ ಅದರ ಕತ್ತನ್ನ ಕಟಂ ಅಂತ ಕಚ್ಚಿ ಬಿಡ್ತಂತೆ.. ಬಕ ಪಕ್ಷಿ ಗೊಟಕ್ ಅಂತು..
ಜಾಣ ಏಡಿ ತಪ್ಪಿಸ್ಕೊಳ್ತು.
ಯಾರನ್ನೂ ಹಾಗೆಲ್ಲ ಸುಮ್ ಸುಮ್ನೆ ನಂಬಬಾರ್ದು.. ಕಷ್ಟ ಬಂದಾಗ ಸಮಾಧಾನವಾಗಿ ಯೋಚನೆ ಮಾಡಿ ಸರಿಯಾಗಿರೋ ಡಿಸಿಶನ್ ತಗೋಬೇಕು..
======================================================================
Ondu koLa ittante. Adarallidda meenugaLanna tinkondu ondu
baka pakshi jeevana maadta ittante.
Baka pakshi koLadalliro meenugaLanna tinkondu jeevana maadta
ittante.
Heege swalpa varsha aada mele baka pakshi ajja aytante.
Adikke menu hidkondu
Tinnakke shaktine irlilvante. Upavasa iddu iddu full saNNa
agogittante adu.
Esht dina oota maadade irakkagatte alva.. Baka pakshi ondu
plan madtante.
KoLada tudiyalli onde kaalalli nintukondu baka pakshi dhyana
madta iro haage naatka
Madakke shuru madtante.
MeenugaLigella ashcharya, esht hottaytu, baka pakshi pakka
ne hodru nu yav meenannu
Tintane illa!
Ondu menu dhairya madi baka pakshi na keLe bidtu, “enaytu
baka pakshi ninge? Menu tinnodu bittubitya?” anta.
Baka pakshi nidhanakke kaNNu tegedu meenige heLtu.. “nenne
namma koLala hattira obba jyotishi bandidda, avnu heLta idda, Nam koLa ee sala besigenalli batti hogattante.. Nange adanna
keLi tumba bejaraytu, naanu ide koLadalli hutti beLedavnu, ee koLada neeru
battidre neevella sattu hogteera, nimgella mukti sikli anta naanu devara dhyana
maadta idini” anta..
MeenugaLige baka pakshi maatu keLi tumba bhaya aytante.. avu
baka pakshige keLidvante.. “jyotishi naavella bachavagakke enadru upaya heLidna?”
Baka pakshige full khushi agoytante.. nanna plan kelsa
madtu.. peddu gunda meenugaLe ivattinda nange habba ankondu heLtante.. “Houdu,
ille swalpa dooralli innondu dodda koLa idyante, alli tumba neeridyante,
bekadre nimmannella allige karkondu hogi bidteeni naanu” anta
Sari, meenugaLu opkondvante bere koLakke hogakke.
Baka pakshi dina ondonde meenanna bennu mele kooriskondu
hogteeni anta haariskondu hogi tindu haakta ittante.
Heege aa koLadalli idda meenella khali aadvante.
Next en madodu, baka pakshi ondu edi na bere koLakke
bidteeni ninna anta karkondu hoytante. Haarta iruvaga, edi keLage nodatte, alli
meenugaLaddu mooLegaLella biddittante. Edi jaana, adikke baka pakshi madida
mosa gottagoytu.. maadteeni ee baka pakshige anta keLtante “baka pakshi, ninge
haari haari sustagirbekalva, swalpa hottu rest tagondu hogona?” anta
Baka pakshi sari anta innenu nelada mele iLibeku annuvaga,
edi adara kattanna katam anta kacchi bidtante.. Baka pakshi gotak antu.. Jaana edi tappiskoLtu.
Yarannu haagella sum sumne nambabardu.. kashta bandaga
samadhanavagi yochane maadi sariyagiro decision tagobeku..
Labels:
baka pakshi,
baka pakshi mattu edi,
dinakkondu kathe,
kahani,
kannada,
kannada kids storiees,
kannada makkala kathe,
karnataka,
kathe,
kids,
kids stories,
makkala kathegalu,
putani kathe,
putani kathegalu,
stories
Thursday, December 25, 2014
ಎರಡು ಬೆಕ್ಕುಗಳ ಕಥೆ - eradu bekkugaLa kathe
ಒಂದೂರಲ್ಲಿ
ಎರಡು ಬೆಕ್ಕುಗಳು ಇದ್ವಂತೆ. ಒಂದಿನ ಅವಕ್ಕೆ ತುಂಬಾ
ಹಸಿವಾಗ್ತಾ ಇತ್ತಂತೆ. ಏನಾದ್ರೂ ತಿನ್ನಕ್ಕೆ ಸಿಗತ್ತಾ
ಅಂತ ಹುಡುಕ್ಕೊಂಡು ಹೋಗ್ತಿರುವಾಗ, ಅವಕ್ಕೆ ಒಂದು ದೊಡ್ಡ
ಬೆಣ್ಣೆ ಮುದ್ದೆ ಸಿಕ್ತಂತೆ.
ಎರಡೂ ಬೆಕ್ಕುಗಳು ನನಗೆ ಜಾಸ್ತಿ ಬೆಣ್ಣೆ
ಬೇಕು, ನನಗೆ ಜಾಸ್ತಿ ಬೆಣ್ಣೆ
ಬೇಕು ಅಂತ ಜಗಳ ಮಾಡಕ್ಕೆ
ಶುರು ಮಾಡಿದ್ವಂತೆ.
ಬೆಕ್ಕುಗಳ
ಜಗಳ ನೋಡಿದ ಒಂದು ಮಂಗಣ್ಣ,
ಬೆಕ್ಕುಗಳಿಗೆ ಹೇಳ್ತಂತೆ..
“ನಾನು ನಿಮಗೆ ಬೆಣ್ಣೆ ನ
ಸರಿಯಾಗಿ ಪಾಲು ಮಾಡಿ ಕೊಡ್ತೀನಿ,
ಜಗಳ ಮಾಡ್ಬೇಡಿ”
ಬೆಕ್ಕುಗಳು
ಒಪ್ಕೊಂಡ್ವಂತೆ.
ಮಂಗಣ್ಣ
ಒಂದು ತಕ್ಕಡಿ ತಂದು, ಬೆಣ್ಣೆ ಮುದ್ದೇನ
ಎರಡು ಭಾಗ ಮಾಡಿ ತಕ್ಕಡಿ
ಎರಡೂ ಕಡೆ ಹಾಕ್ತಂತೆ.
ಒಂದು ಕಡೆ ಸ್ವಲ್ಪ ಬೆಣ್ಣೆ
ಜಾಸ್ತಿ ಆಗಿ ತಕ್ಕಡಿ ಈಕಡೆ ವಾಲ್ತಂತೆ. ಮಂಗಣ್ಣ
“ಅಯ್ಯೋ ಈಕಡೆ ಸ್ವಲ್ಪ ಬೆಣ್ಣೆ
ಜಾಸ್ತಿ ಆಗ್ಬಿಟ್ಟಿದೆ, ನಾ ಸ್ವಲ್ಪ ತಿಂದು
ಸರಿ ಮಾಡ್ತೀನಿ” ಅಂತ
ಚೂರು ಬೆಣ್ಣೆ ತಗೊಂಡು ತಿಂತಂತೆ.
ಇವಾಗ ತಕ್ಕಡಿ ಇನ್ನೊಂದ್ ಕಡೆ
ಭಾರ ಜಾಸ್ತಿ ಆಗಿ ಆಕಡೆ ವಾಲ್ತಂತೆ.
ಮತ್ತೆ ಮಂಗಣ್ಣ ಆಕಡೆ ಬೆಣ್ಣೆ
ಸ್ವಲ್ಪ ತಿಂತಂತೆ.
ಪೆದ್ದು
ಬೆಕ್ಕುಗಳು, ಮಂಗಣ್ಣ ಪಾಲು ಮಾಡಿ
ಕೊಡತ್ತೆ, ಬೆಣ್ಣೆ ಸಿಗತ್ತೆ ತಿನ್ನಕ್ಕೆ
ಅಂತ ಸುಮ್ನೆ
ಪಿಳಿ ಪಿಳಿ ಕಣ್ಣು ಬಿಟ್ಕೊಂಡು
ನೋಡ್ತಾ ಕೂತಿದ್ವಂತೆ.
ಜ಼ಾಣ ಮಂಗಣ್ಣ, ಆಕಡೆ ಈಕಡೆ
ಬೆಣ್ಣೆ ತಿಂತಾ ತಿಂತಾ ಪೂರ್ತಿ
ಬೆಣ್ಣೆ ಖಾಲಿ ಮಾಡಿ ಓಡಿ
ಹೋಯ್ತಂತೆ.
ಪಾಪ ಬೆಕ್ಕುಗಳಿಗೆ ಬೆಣ್ಣೆನೇ ಸಿಗ್ಲಿಲ್ವಂತೆ..
ಬೆಕ್ಕುಗಳೇ
ಜಗಳ ಮಾಡದೇನೇ ಬೆಣ್ಣೆ ಹಂಚಿಕೊಂಡಿದ್ರೆ
ಹೀಗೆಲ್ಲ ಆಗ್ತಿತ್ತ.. ಅದಿಕ್ಕೆ ಹೇಳೋದು, ಇಬ್ಬರ
ಜಗಳ, ಮೂರನೆಯವನಿಗೆ ಲಾಭ ಅಂತ..
===========================================================
Ondooralli eradu bekkugalu idvante. Ondina avakke tumba
hasvagta ittante. Enadru tinnakke sigatta anta hudukkondu hogtiruvaga, avakke
ondu dodda benne mudde siktante.
Eradoo bekkugalu nange jasti benne beku, nange jasti beku
anta jagaLa madakke suru madidvante.
BekugaLa jagaLa nodida ondu mangaNNa, bekkugaLige heLtante..
“naanu nimge beNNe na sariyagi paalu maadi kodteeni, jagaLa
madbedi”
bekkugaLu opkondvante.
MangaNNa ondu takkadi tantdu beNNe mudena erdu bhaga
maadi takkadi erdoo kade haaktante.
Ondu kade swalpa beNNe jaasti agi takkadi vaaltante.
MangaNNa “ayyo eekade swalpa beNNe jasti aagbittide, na swalpa tindu sari
maadteeni” anta chooru beNNe tagondu
tintante.
Ivaga takkadi innond kade bhara jasti aagi aakade vaaltante.
Matte MangaNNa aakade beNNe swalpa tintante.
Peddu bekkugaLu, MangaNNa paalu madi kodatte, beNNe sigatte
tinnakke anta sumne piLi piLi kaNNu
bitkondu nodta kootidvante.
JaaNa mangaNNa, aakade eekade beNNe tinta tinta poorti beNNe
khali maadi odi hoytante.
Paapa bekkugaLige beNNe ne siglilvante..
BekkugaLe jagaLa maDadene beNNe hanchikondidre heegella
aagtitta.. Adikke heLodu, ibbara jagaLa, mooraneyavanige laabha anta..
Labels:
bedtime,
kaagakka gubbakka,
kagakka gubbakka,
kahani,
kannada,
kannada kids stories,
kannada makkala kathe,
karnataka,
kathe,
kids,
kids stories,
makkala kathegalu,
putani kathe,
putani kathegalu,
stories,
story
Kaagakka gubbakkana kathe - ಕಾಗಕ್ಕ ಗುಬ್ಬಕ್ಕನ ಕಥೆ
ಒಂದೂರಲ್ಲಿ
ಕಾಗಕ್ಕ ಮತ್ತೆ ಗುಬ್ಬಕ್ಕ ಅಂತ
ಫ್ರೆಂಡ್ಸ್ ಇದ್ವಂತೆ. ಕಾಗಕ್ಕಂದು ಮಣ್ಣಿನ ಮನೆ, ಗುಬ್ಬಕ್ಕಂದು
ಕಲ್ಲಿನ ಮನೆ ಅಂತೆ.
ಒಂದ್ ಸಲ ಜೋರಾಗಿ ಮಳೆ
ಬಂತಂತೆ. ಆವಾಗ ಕಾಗಕ್ಕಂದು ಮನೆ
ಮಳೇಲಿ ಕರಗಿ ಹೋಗ್ಬಿಡ್ತಂತೆ. ಕಾಗಕ್ಕ
ಅಯ್ಯೋ ದೇವ್ರೇ, ಏನ್ ಮಾಡ್ಲಿ
ಇವಾಗ, ಸಕತ್ ಚಳಿ ಆಗ್ತಿದ್ಯಲಾ..
ಗುಬ್ಬಕ್ಕನ ಮನೆಗೆ ಹೋಗಣ ಅಂತ
ಗುಬ್ಬಕ್ಕನ ಮನೆಗೆ ಬಂತಂತೆ.
ಕಾಗಕ್ಕ
“ಗುಬ್ಬಕ್ಕಾ.. ಗುಬ್ಬಕ್ಕಾ.. ಬಾಗ್ಲು ತೆಗಿಯೇ..” ಅಂತ
ಕೇಳ್ತಂತೆ.
ಆವಾಗ ಗುಬ್ಬಕ್ಕ “ತಾಳು ಕಾಗಕ್ಕ, ನನ್
ಮಕ್ಳಿಗೆ ಸ್ನಾನ ಮಾಡ್ಸ್ತಾ
ಇದೀನಿ, ಸ್ವಲ್ಪ ಹೊತ್ತು ಬಿಟ್ಟು
ಬಾ” ಅಂತಂತೆ.
ಒಂದ್ ಸ್ವಲ್ಪ ಹೊತ್ತು ಬಿಟ್ಟು,
ಕಾಗಕ್ಕ ಮತ್ತೆ ಕೇಳ್ತಂತೆ.. “ಗುಬ್ಬಕ್ಕಾ..
ಗುಬ್ಬಕ್ಕಾ.. ಬಾಗ್ಲು ತೆಗಿಯೇ..”
ಗುಬ್ಬಕ್ಕಾ
ಈಸಲ, “ನನ್ ಗಂಡಂಗೆ ಊಟ
ಬಡಿಸ್ತಾ ಇದೀನಿ, ಆಮೇಲೆ ಬಾ
ಕಾಗಕ್ಕ” ಅಂತಂತೆ.
ಸರಿ ಕಾಗಕ್ಕ ಮತ್ತೆ ಕೇಳ್ತಂತೆ
“ಗುಬ್ಬಕ್ಕಾ.. ಗುಬ್ಬಕ್ಕಾ.. ಬಾಗ್ಲು ತೆಗಿಯೇ..”
ಗುಬ್ಬಕ್ಕಾ
ಬಾಗ್ಲು ತೆಗೀತಂತೆ.
ಕಾಗಕ್ಕ,
“ಗುಬ್ಬಕ್ಕಾ, ನನ್ ಮನೆ ಮಳೇಲಿ
ಕರ್ಗಿ ಹೋಯ್ತು, ಇವತ್ತು ರಾತ್ರಿ
ನಿಮ್ಮನೇಲಿ ಮಲ್ಕೋಬೋದಾ” ಅಂತ ರಿಕ್ವೆಸ್ಟ್ ಮಾಡ್ಕೋತಂತೆ..
“ಓ
ಹೌದಾ.. ಪಾಪ.. ಸರಿ, ಕೆಳಗಡೆ
ಜಾಗ ಇಲ್ಲ, ಮೇಲೆ ಅಟ್ಟದಲ್ಲಿ
ಬೇಕಾದ್ರೆ ಮಲ್ಕೋ” ಅಂತ ಹೇಳ್ತಂತೆ ಗುಬ್ಬಕ್ಕ.
ಸರಿ, ಕಾಗಕ್ಕ ಅಟ್ಟದ್ ಮೇಲೆ
ಹೋಯ್ತಂತೆ.. ನೋಡಿದ್ರೆ ಅಲ್ಲಿ ಅಕ್ಕಿ ಮೂಟೆ,
ರಾಗಿ ಮೂಟೆ, ಕಡ್ಲೆ ಕಾಯಿ
ಮೂಟೆ ಎಲ್ಲ ಇತ್ತಂತೆ.. ಕಾಗಕ್ಕ ಬೆಚ್ಚಗೆ
ಕಡ್ಲೆ ಬೀಜದ ಮೂಟೆ ಮೇಲೆ ಮಲ್ಕೊಳ್ತಂತೆ .
ಕಾಗಕ್ಕಂಗೆ
ರಾತ್ರಿ ಒಂದ್ ಹೊತ್ತಲ್ಲಿ ಹಸ್ವಾಗಕ್ಕೆ
ಶುರು ಆಯ್ತಂತೆ… ಹೇಗಿದ್ರೂ ಕಡ್ಲೆ ಬೀಜದ ಮೂಟೆ
ಮೇಲೆ ಮಲ್ಕೊಂಡಿತ್ತಲ್ವಾ, ಒಂದೊಂದೇ ಕಡ್ಲೆ ಬೀಜಾನ
“ಕಟಂ ಕಟಂ” ಅಂತ ತಿನ್ನಕ್ಕೆ ಶುರು ಮಾಡ್ತಂತೆ..
ಕೆಳ್ಗಡೆ
ಗುಬ್ಬಕ್ಕ, ಅಯ್ಯೋ ಪಾಪ ಕಾಗಕ್ಕ
ಚಳಿಗೆ ನಡಗ್ತಾ ಇದೆ ಅಂತ
ಅನ್ಕೋತಂತೆ.
ಮೂಟೆ ಪೂರ್ತಿ ಖಾಲಿ
ಮಾಡಿ ಗುಬ್ಬಕ್ಕಂಗೆ ಗೊತ್ತಾಗ್ದೇ ಇರೋ ಹಾಗೆ ಕಾಗಕ್ಕ
ಹಾರೋಗ್ಬಿಡ್ತಂತೆ.
ಬೆಳಿಗ್ಗೆ
ಎದ್ದು ಗುಬ್ಬಕ್ಕ ತಿಂಡಿ ಮಾಡಕ್ಕೆ ಕಡ್ಲೆ
ಬೀಜ ಹುಡ್ಕತ್ತಂತೆ… ನೋಡಿದ್ರೆ ಎಲ್ಲ ಖಾಲಿ..!! ಗುಬ್ಬಕ್ಕಂಗೆ
ತುಂಬಾ ಸಿಟ್ಟು ಬಂತಂತೆ, ಪಾಪ
ಅಂತ ಮಲ್ಕೊಳಕ್ಕೆ ಜಾಗ ಕೊಟ್ರೆ ಕಡ್ಲೆ
ಬೀಜ ಎಲ್ಲ ತಿಂದು ಹೇಳ್ದೆ
ಕೇಳ್ದೆ ಹಾರೋಗಿದೆ ಕಾಗಕ್ಕ, ಸರ್ಯಾಗಿ ಬುದ್ಧಿ ಕಲ್ಸ್ಬೇಕು ಇದಿಕ್ಕೆ
ಅಂತ ಅನ್ಕೋತಂತೆ.
ಮಾರನೇ ದಿನ ಗುಬ್ಬಕ್ಕ,
"ಕಾಗಕ್ಕ, ಇವತ್ತು ನನ್ ಮಕ್ಳದ್ದು
ಬರ್ತ್ಡೇ ಪಾರ್ಟೀ, ಪ್ಲೀಸ್
ಬಾ ಅಂತ ಕರೀತಂತೆ. ಈಕಡೆ ದೋಸೆ ಹಂಚನ್ನ ಕೆಂಡದ
ಮೇಲೆ ಚನ್ನಾಗಿ ಕಾಯಿಸ್ತಂತೆ.
ಕಾಗಕ್ಕ
ಗುಬ್ಬಕ್ಕನ ಮನೆಗೆ ಬಂತಂತೆ.
ಗುಬ್ಬಕ್ಕ “ಕಾಗಕ್ಕ ಕಾಗಕ್ಕ ಹೊರಗಡೆ ತುಂಬಾ ಚಳಿ, ಬಾ ಇಲ್ಲಿ
ಬೆಚ್ಚಗೆ ಕೂತ್ಕೊ” ಅಂತ ಹೇಳ್ತಂತೆ.
ಕಾಗಕ್ಕ
ಪೆದ್ದು, ಬಂದು ಕಾದ ದೋಸೆ
ಹೆಂಚಿನ ಮೇಲೆ ಕೂತ್ಕೊಂಡು ಬಿಡ್ತಂತೆ… ಚುರ್ರ್
ಅಂತ ಕಾಗಕ್ಕ ಸುಟ್ಟುಕೊಂಡು ಕರ್ರಗಾಗೋಯ್ತಂತೆ..
ಅದಿಕ್ಕೆ
ಕಾಗೆ ಬಣ್ಣ ಕರಿ ಗೊತ್ತಾ.. :D
======================
Ondooralli kagakka matte gubbakka anta friends idvante. Kagakkandu
maNNina mane , gubbakkandu kallina mane ante.
Ond sala joragi maLe bantante. Avaga kaagakkandu mane maLeli
karagi hogbidtante. Kaagakka ayyo devre, en maadli ivaga, sakat chali
agtidyala.. gubbakkan manege hogaNa anta gubbakkan manege bantante.
Kaagakka “Gubbakka.. gubbakka.. baglu tegiye..” anta keLtante.
Avaga gubbakka “taalu kagakka, nan makLige snana madsta
idini, swalpa hottu bittu ba” antante.
Ond swalpa hottu bittu, kagakka matte keLtante.. “Gubbakka..
gubbakka.. baglu tegiye..”
Gubbakka eesala, “Nan gandange oota badsta idini, amele ba
kagakka” antante.
Sari kagakka matte keLtante “Gubbakka.. gubbakka.. baglu
tegiye..”
Gubbakka baglu tegitante.
Kaagakka, “Gubbakka, nan mane maLeli kargi hoytu, ivattu
ratri nimmaneli malkoboda” anta request madkotante..
“Oh houda.. paapa.. sari, keLagade jaaga illa, mele
attadalli bekadre malko” anta heLtante gubbakka.
Sari, kaagakka attad mele hoytante.. nodidre alli akki
moote, raagi moote, kadle kayi moote ella ittante.. Kagakka, bechchage kadle beejada moote mele
malkoLtante.
Kagakkange ratri ond hottalli hashvagakke shuru aytante…
hegidru kadle beejada moote mele malkodittalva, ondonde kadle beejana “katam
katam” anta tinnakke shuru madtante..
Gubbakka, ayyo paapa kagakka
chalige nadgta ide anta ankotante.
moote poorti khali maadi gubbakkange
gottagde iro haage kaagakka haarogbidtante.
Beligge eddu gubbakka tindi madakke kadle beeja hudkattante…
nodidre ella khali..!!
Gubbakkange tumba sittu bantante, paapa anta malkoLakke
jaaga kotre kadle beeja ella tindu heLde keLde harogide kagakka, saryagi buddhi
kalsbeku idikke anta ankotante.
Marne dina Gubbakka, "Kaagakka, ivattu nan makladdu birthday
party, please ba" anta karitante. Eekade dose hanchanna kendad mele channagi
kaystante. Kaagakka gubbakkan manege bantante. Gubbakka “kaagakka kaagakka
horgade tumba chali, ba illi bechchage kootko” anta heLtante.
Kaagakka peddu, bandu kaada dose henchin mele kootkotante…
churrr anta kaagakka sutkondu karragagoytante..
Adikke kaage banna kari gotta.. :D
Labels:
bedtime,
dinakkondu kathe,
kaagakka gubbakka,
kagakka gubbakka,
kahani,
kannada,
kannada kids stories,
kannada makkala kathe,
karnataka,
kathe,
kids,
kids stories,
makkala kathegalu,
stories,
story
Subscribe to:
Posts (Atom)